ವಿನೇಶಾ ಗಿಂತ ಗಟ್ಟಿ ಶಿವಾನಿ ಪವಾರ.
ಈಕೆ ಶಿವಾನಿ ಪವಾರ್. ಶಿವಾನಿ ಮಧ್ಯ ಪ್ರದೇಶದ ಉಮ್ರೆಡ್ ಅನ್ನುವ ಗ್ರಾಮದಿಂದ ಉದಯಿಸಿದ ಉದಯೋನ್ಮುಖ ಪ್ರತಿಭೆ. ಈಗ ಇವರು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನಲ್ಲಿ ಕಾನ್ಸ್ಟಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಶಿವಾನಿ ಹಿಂದೆ ರಾಷ್ಟ್ರೀಯ ಕುಸ್ತಿ ಕ್ರೀಡಾಕೂಟದಲ್ಲಿ 50 ಕೆಜಿ ವಿಭಾಗದಲ್ಲಿ ವಿನೇಶ್ ಫೊಗಟ್‌ಳನ್ನು ಸೋಲಿಸಿದ್ದು.
ಈಗ ವಿನೇಶ್ ವಿಷಯಕ್ಕೆ ಬರೋಣ. ವಿನೇಶ್ ಮೂಲತಃ 53 ಕೆಜಿ ಕೆಟಗರಿಯವಳು. ಕುಸ್ತಿಪಟುಗಳು ಅವರವರ ತೂಕದ ಕೆಟಗರಿಯಲ್ಲಿ ಆಡುವುದು ನಿಯಮಬದ್ಧವಾಗಿರುತ್ತದೆ. ಆದರೆ ವಿನೇಶ್‌ನಂತಹ ಧೂರ್ತರು ತಮಗಿಂತ ಕಡಿಮೆ ತೂಕದ ಕೆಟಗರಿ ಯಲ್ಲಿ ಆಡಲು ಪ್ರಯತ್ನಿಸುತ್ತಾರೆ. ಯಾಕೆಂದರೆ ಅಲ್ಲಿ ಅವರಿಗೆ ಸಿಗುವುದು ನೈಸರ್ಗಿಕವಾಗಿ ಅವರಿಗಿಂತ ಕಡಿಮೆ ತೂಕದವರು. ಆದ್ದರಿಂದ ಅವರನ್ನು ಮಟ್ಟ ಹಾಕುವುದು ಸುಲಭ. ಆದರೆ ಅದೇ 53 ಕೆಜಿ ಕೆಟಗರಿ ಯಲ್ಲಿ ಅವರಿಗಿಂತ ಬಲಾಢ್ಯರೊಂದಿಗೆ ಸೆಣಸಬೇಕಾಗುತ್ತದೆ. ವಿನೇಶ್ ಇದೇ ಕಾರಣಕ್ಕೆ 50 ಕೆಜಿ ಕೆಟಗರಿಯಲ್ಲಿ ಆಡಲು ನಿರ್ಧರಿಸಿದ್ದು. ಆದರೆ ಫೆಡರೇಷನ್ ಅವಳಿಗೆ ಒಲಿಂಪಿಕ್ಸ್ ಆಯ್ಕೆಯ ಟ್ರಯಲ್ ಪಂದ್ಯದಲ್ಲಿ ಭಾಗವಹಿಸಿ, ಆಯ್ಕೆಯಾದರೆ ಮಾತ್ರ ಒಲಿಂಪಿಕ್ಸ್ ಗೆ ಕಳುಹಿಸುವುದಾಗಿ ಹೇಳಿತು.
ಇದಕ್ಕೆ ಸುತರಾಂ ಒಪ್ಪದ ವಿನೇಶ್ ಒತ್ತಡ ಹೇರಲು ಆರಂಭಿಸಿದಳು. ಆದರೆ ಕುಸ್ತಿ ಫೆಡರೇಷನ್ ಬಗ್ಗದೆ ಅವಳನ್ನು ಆಯ್ಕೆ ಟ್ರಯಲ್ ಪಂದ್ಯದಲ್ಲಿ ಭಾಗವಹಿಸುವಂತೆ ಸೂಚಿಸಿದ್ದು. ಆಗಲೇ ಇವಳು 50 ಕೆಜಿ ಕೆಟಗರಿ ಯಲ್ಲಿನ ಇದೇ ಶಿವಾನಿ ಪವಾರರನ್ನು ಸೋಲಿಸಿ (ಗಮನಿಸಿ 6/10, ಅಂದರೆ ಶಿವಾನಿ ಪವಾರ್‌ರವರು ಅತ್ಯಂತ ಪ್ರಬಲರಾಗಿ ಇವಳನ್ನು ಎದುರಿಸಿದ್ದರು). ಆದರೆ ತನಗಿಂತ ಹೆಚ್ಚಿನ ದೇಹಧಾರ್ಡ್ಯ ಹೊಂದಿದವರನ್ನು ಎದುರಿಸುವುದು ಕುಸ್ತಿಯಲ್ಲಿ ಸುಲಭವಲ್ಲ. ಹೀಗಾಗಿ 50 ಕೆಜಿ ಕೆಟಗರಿಯಲ್ಲಿ ಮೋಸದಿಂದ ಆಯ್ಕೆ ಯಾದ ಫೋಗಟ್ ಕಥೆ ಏನಾಯಿತೆಂದು ನಿಮಗೆ ತಿಳಿದಿದೆ. ಸಾಧಾರಣವಾಗಿ ತಮ್ಮ ತಮ್ಮ ನೈಸರ್ಗಿಕ ಕೆಟಗರಿಗಳಲ್ಲಿ ಆಡಿದರೆ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ.
ಆದರೆ ಈಗ ಕುಸ್ತಿ ಹರಿಯಾಣದಲ್ಲಿನ ಕೆಟ್ಟ ರಾಜಕಾರಣದಿಂದಾಗಿ ಕುಸ್ತಿರಂಗ ಕುಲಗೆಟ್ಟು ಹೋಗಿದೆ. ಕಾರಣ ಇದರಲ್ಲಿನ ಅಪಾರ ಹಣ. ಆದ್ದರಿಂದ ಅಲ್ಲಿನ ಕುಸ್ತಿ ಫೆಡರೇಷನ್ ಗಳಲ್ಲಿ ಕುಸ್ತಿ ಕಮ್ಮಿ, ರಾಜಕೀಯ ಕುಸ್ತಿಗಳು ಜಾಸ್ತಿ. ಅಲ್ಲದೆ ಈ ಹರಿಯಾಣ್ವೀಗಳು ರಾಷ್ಟ್ರೀಯ ಕುಸ್ತಿ ಫೆಡರೇಷನ್‌ನಲ್ಲಿ ವರ್ಚಸ್ವ ಸ್ಥಾಪಿಸಲು ಇಲ್ಲಸಲ್ಲದ ಷಡ್ಯಂತ್ರಗಳಲ್ಲಿ ತೊಡಗಿದ್ದಾರೆ.
ಅದರ ಫಲವೇ ರಾಷ್ಟ್ರೀಯ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್‌ರವರ ಮೇಲೆ ಹೊರಿಸಿದ ಲೈಂಗಿಕ ಕಿರುಕುಳ ಅರೋಪ. ಆತನೂ ಜಪ್ಪೆನ್ನದ ಗಟ್ಟಿಪಿಂಡ. ಈ ಆರೋಪವನ್ನು ಸಾಬೀತು ಪಡಿಸಲು ಯಾವುದೇ ಪುರಾವೆ ನೀಡದ ಕುಸ್ತಿ ಪಟುಗಳು ಬರೀ ಬೊಬ್ಬೆ ಹೊಡೆದು ಪ್ರಚಾರ ಗಿಟ್ಟಿಸುವ ಕಾಯಕದಲ್ಲೇ ತೊಡಗಿದರು. ಇವರಿಗೆ ಬೆಂಬಲವಾಗಿ ಎಡಚರು, ನಗರ ನಕ್ಸಲರು. ಸಾಹಜಿಕವಾಗಿ ಎಲ್ಲಾ ದೇಶವಿರೋಧಿ ಚಟುವಟಿಕೆಗಳಲ್ಲಿ ಕಾಂಗ್ರೆಸ್ ಪಾತ್ರವೂ ಮುಖ್ಯ. ಆದ್ದರಿಂದ ಕಾಂಗ್ರೆಸ್‌ನ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾನ ಮಗ ವಿಜೇಂದರ್ ಸಿಂಗ್ ಹೂಡಾ ಸಹ ಇದರ ಭಾಗ.
ಶಿವಾನಿ ಪವಾರ್‌ಗೆ ಅವರ ಸಹಜ ಎದುರಾಳಿ 50 ಕೆಜಿ ಕೆಟಗರಿಯವಳು ಲಭಿಸಿದ್ದರೆ ಅವರು ಸಹಜವಾಗಿ ಒಲಿಂಪಿಕ್ಸ್ ಆಯ್ಕೆ ಟ್ರಯಲ್ ನಲ್ಲಿ ಜಯಶೀಲರಾಗುತ್ತಿದ್ದರು. ಬಹುಶಃ ಭಾರತಕ್ಕೆ ಕುಸ್ತಿ ಯಲ್ಲಿ ಸ್ವರ್ಣವೂ ಲಭಿಸುತ್ತಿತ್ತು. ಈ ಸಮಸ್ತ ಹಗರಣದಲ್ಲಿ ನಿಜವಾಗಿಯೂ ಅನ್ಯಾಯಕ್ಕೆ ಒಳಗಾಗಿದ್ದು ಶಿವಾನಿ ಪವಾರ್ ರಂತಹ ಗ್ರಾಮೀಣ ಪ್ರತಿಭೆ. ಆದರೆ ಇದರ ವಿರುದ್ಧ ಧ್ವನಿ ಎತ್ತಲು ಯಾವ ಮಾಧ್ಯಮವೂ ಮುಂದೆ ಬರುವುದಿಲ್ಲ. ಕಾರಣ ಇದರಲ್ಲಿ ಅವರಿಗೆ ಟಿ ಆರ್ ಪಿ ಸಿಗುವುದಿಲ್ಲ.
ಹರಿಯಾಣದ ಕುಸ್ತಿ ಪಟುಗಳ ಆಂದೋಲನದ ಮೂಲಕಾರಣ ಅವರನ್ನು ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಯ್ಕೆ ಟ್ರಯಲ್ ಗಳಲ್ಲಿ ಭಾಗವಹಿಸಲು ಹೇಳದೆ ಸೀದಾ ಆಯ್ಕೆ ಮಾಡಿ ಕಳಿಸಬೇಕು ಎಂಬ ಒತ್ತಡ. ಇದಕ್ಕೆ ಬಗ್ಗದ ಕಾರಣಕ್ಕೆ ಬ್ರಿಜ್ ಭೂಷಣ್ ಸಿಂಗ್ ರವರ ಮೇಲೆ ಸುಳ್ಳು ಆಪಾದನೆ ಹೊರಿಸಿ ಅವರನ್ನು ಫೆಡರೇಷನ್ ಅಧ್ಯಕ್ಷ ಪದವಿಯಿಂದ ಕೆಳಗಿಳಿಸಿದ್ದು.
ಮಾಹಿತಿ: ನಿರಂಜನ್ ಪಡುಬಿದ್ರಿ.
.jpg)

0 Comments:
Post a Comment
Subscribe to Post Comments [Atom]
<< Home