ಪುಟ್ಟ ಪೋರಿ (ಐರಾ ಮಂಜುನಾಥ ಪಾಟೀಲ) ಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲೆ.
ಹಾವೇರಿ : ಹಾವೇರಿ ನಗರದ ಮಂಜುನಾಥ ಪಾಟೀಲ ಇವರ ಮಗಳಾದ ಐರಾ ಪಾಟೀಲ (3 ವರ್ಷ ) ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ.
ಬಾಲಕಿ 21 ತರಹದ ಹಣ್ಣುಗಳ ಹೆಸರು, 25 ತರಕಾರಿಗಳ ಹೆಸರು, 25 ಆಹಾರ ತಿಂಡಿಗಳ ಹೆಸರು, 35 ಪ್ರಾಣಿಗಳ ಹೆಸರು,
15 ದೇಶದ ರಾಷ್ಟ್ರೀಯ ಚಿನ್ಹೇಗಳ ಹೆಸರು, ದೇಹದ 21 ಅಂಗಗಳು, 15 ವಿರುದ್ದ ಪದಗಳು, ಕರ್ನಾಟಕದ 31 ಜಿಲ್ಲೆಗಳು, 15 ಬಣ್ಣಗಳು, 39 ವಾಹನಗಳು ಹಾಗೂ ಇನ್ನಿತರ ಸಾಮಾನ್ಯ ವಿಷಯಗಳನ್ನು ಪಟಪಟನೆ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನವನ್ನು ಪಡೆದಿದ್ದಾಳೆ.
ಬಾಲಕಿಯ ಸಾಧನೆಗೆ ತಂದೆ ಮಂಜುನಾಥ ಪಾಟೀಲ ಹಾಗೂ ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Labels: information
.jpg)

0 Comments:
Post a Comment
Subscribe to Post Comments [Atom]
<< Home