Sunday, July 28, 2024

ತಮಿಳ್ ರಾಕರ್ಸ್ ಅಡ್ಮಿನ್ ಅರೆಸ್ಟ್

ತಿರುವನಂತಪುರಂ: ಇಂದು ತಮಿಳು ರಾಕರ್ಸ್ ಅಡ್ಮಿನ್ ನನ್ನು ಪೊಲೀಸರು ಬಂದಿಸಿದ್ದು ಇನ್ನೂ ಮುಂದೆ ನೀವು ಪುಕ್ಕಟ್ಟೆಯಗಿ ಹೊಚ್ಚ ಹೊಸ ಸಿನೆಮಾ ಗಳನ್ನು ಪುಕ್ಕಟೆಯಾಗಿ ಮೊಬೈಲ್ ನಲ್ಲಿ ವೀಕ್ಷಿಸಲು ಆಗುವುದಿಲ್ಲ. 



ಕಳೆದ ಹಲವು ವರ್ಷಗಳಿಂದ ಸಿನೆಮಾ ನಿರ್ಮಾಪಕರಿಗೆ ಇವನು ವಿಲನ್ ಆಗಿದ್ದ. 


ಸ್ಟೀಫನ್ ರಾಜ್ ಬಂದಿತ ಆರೋಪಿ ಆಗಿದ್ದು ಕೇರಳದ ತಿರುವನಂತಪುರಂ ನಲ್ಲಿರುವ ಏರಿಯಾಸ್ ಚಿತ್ರ ಮಂದಿರ ದಲ್ಲಿ ಈತನನ್ನು ಪೊಲೀಸರು ಬಂದಿಸಿದ್ದಾರೆ ಎಂದು ಮಾಹಿತಿ ಬಂದಿದೆ. 


ಯಾವುದೇ ಹೊಸ ಸಿನೆಮಾ ಬಂದಾಗ ತಮಿಳು ರಾಕರ್ಸ್ ನಲ್ಲಿ ಕೆಲವೇ ಗಂಟೆಗಳಲ್ಲಿ ಸಿಗುತಿತ್ತು ಇದರಿಂದಾಗಿ ಜನರು ಸಿನೆಮಾ ಮಂದಿರಕ್ಕೆ ಬಾರದೇ ಮನೆಯಲ್ಲಿಯೇ ಚಿತ್ರಗಳನ್ನು ನೋಡುತಿದ್ದರು ಮತ್ತು ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ಹಣ ನಷ್ಟ ಆಗುತಿತ್ತು ಈವನ ಮೇಲೆ ಅನೇಕ ನಿರ್ಮಾಪಕರು ದೂರು ನೀಡಿದ್ದರು ಇವನನ್ನು ಬಂದಿಸಲು ಆಗುತ್ತಿರಲಿಲ್ಲ ಮತ್ತು ತಮಿಳು ರಾಕರ್ಸ್ ವೆಬ್ ಸೈಟ್ ಬ್ಲಾಕ್ ಮಾಡಿದರು ಬೇರೆ ಒಂದು ಹೆಸರಿನಿಂದ ಮತ್ತೆ ಮತ್ತೆ ಇದು ಚಿತ್ರಗಳನ್ನು ಅಪ್ಲೋಡ್ ಮಾಡುತಿತ್ತು. ಇದರಿಂದಾಗಿ ಜನರು ಚಿತ್ರ ಮಂದಿರಕ್ಕೆ ಬರುತ್ತಿರಲಿಲ್ಲ. 


ಬಂದಿಸಿದ್ದು ಹೇಗೆ ?


ಸ್ಟೀಫನ್​ ಒಂದು ವರ್ಷಗಳಿಂದಲೂ ಹೊಸ ಸಿನಿಮಾ ರಿಲೀಸ್​ ಆಗುತ್ತಿದ್ದಂತೆಯೇ ಮೊದಲಿಗೆ ಬರುತ್ತಿದ್ದನಂತೆ. ಸೀಟಿನಲ್ಲಿ ಚಿಕ್ಕ ಕ್ಯಾಮೆರಾ ಅಳವಡಿಸಿ ಹೊಸ ಚಿತ್ರಗಳ ವಿಡಿಯೋ ತೆಗೆಯುತ್ತಿದ್ದ ಎಂದು ಹೇಳಿದ್ದಾನೆ. ಒಂದು ವರ್ಷದಿಂದಲೂ ಹೊಸ ಚಿತ್ರಗಳನ್ನು ಅಪ್‌ ಲೋಡ್ ಮಾಡುತ್ತಿದ್ದೇನೆ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಒಂದು  ಚಿತ್ರಕ್ಕೆ  5 ಸಾವಿರ ರೂಪಾಯಿ ಕಮಿಷನ್ ಪಡೆದು ವೆಬ್ ​ಸೈಟ್ ನಲ್ಲಿ ಅಪ್ ಲೋಡ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.


ಹಾವೇರಿ ಸುದ್ದಿ ಯ ಸುದ್ದಿಗಳನ್ನು ನಿಮ್ಮ ವಾಟ್ಸಾಫ್ ಗ್ರೂಪ್ ಗಳಿಗೆ ಕಳುಹಿಸ ಬೇಕೇ ? ಹಾಗಿದ್ದರೆ ನಿಮ್ಮ ವಾಟ್ಸಾಫ್ ಗ್ರೂಪ್ ಗೆ 9886461432 ನಂಬರ್ ಸೇರಿಸಿ. 


Labels:

0 Comments:

Post a Comment

Subscribe to Post Comments [Atom]

<< Home