Sunday, July 6, 2025

ಬಿಪಿಎಲ್ ಕಾರ್ಡ್ ಮಹಿಳೆಯರಿಗೆ 35 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿ

 ತರಬೇತಿ ಅವಧಿ: 14 ಜುಲೈ 2025 ರಿಂದ 17 ಆಗಸ್ಟ್ 2025.ಬಿಪಿಎಲ್ (BPL) ಕಾರ್ಡ್ ಹೊಂದಿರುವ ಮಹಿಳೆಯರಿಗೆ ಆದ್ಯತೆ.ನೇರ ಕಾಲ್ ಅಥವಾ ಆನ್ಲೈನ್ ಅರ್ಜಿ ಮೂಲಕ ಅರ್ಜಿ ಸಲ್ಲಿಸಿ

ಸ್ವಂತ ಉದ್ಯಮ ಆರಂಭಿಸಲು ಇಚ್ಛೆ ಹೊಂದಿರುವ ಮಹಿಳೆಯರಿಗೆ ಸೌಂದರ್ಯ ಕ್ಷೇತ್ರದಲ್ಲಿ ಸೂಕ್ತ ತರಬೇತಿ ನೀಡುವ ಉದ್ದೇಶದಿಂದ ಕನರಾ ಬ್ಯಾಂಕ್ RSETI (Canara Bank Rural Self Employment Training Institute) ಸಂಸ್ಥೆಯಿಂದ ಉಚಿತ 35 ದಿನಗಳ ‘ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್’ ತರಬೇತಿ (Free Beautician Training) ನೀಡಲಾಗುತ್ತಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಉದ್ಯಮ ಆರಂಭಿಸಲು ಪ್ಲಾನ್ ಇದೆಯಾ? ಇದು ನಿಮ್ಮ ಆರಂಭದ ಹಂತ! ಈ ತರಬೇತಿಯು ಕೇವಲ ತರಬೇತಿಯಲ್ಲ, ಇದರಲ್ಲಿ ಭಾಗವಹಿಸುವವರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯೂ ಉಚಿತವಾಗಿದೆ.ತರಬೇತಿ ನಂತರ ಸ್ವತಃ ಬ್ಯೂಟಿ ಪಾರ್ಲರ್ ಆರಂಭಿಸಲು ಸಿದ್ಧತೆಯನ್ನೂ ರೂಪಿಸಬಹುದು.

ಅರ್ಜಿ ಸಲ್ಲಿಸಲು ಅರ್ಹತೆ ಏನು?

ಬಿಪಿಎಲ್ ಕಾರ್ಡ್ (BPL Card) ಹೊಂದಿರುವ 18 ರಿಂದ 45 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ಬಲ್ಲವರಾಗಿರಬೇಕು. ಗ್ರಾಮೀಣ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ತರಬೇತಿ ಪಡೆದ ನಂತರ ಸ್ವ ಉದ್ಯಮ ಆರಂಭಿಸಲು ಬದ್ಧತೆ ಇರಬೇಕು.

ತರಬೇತಿ ವಿಷಯಗಳು ಯಾವುವು?

ಈ 35 ದಿನಗಳಲ್ಲಿ ಭಾಗವಹಿಸುವವರು ಮೇಕಪ್, ಸ್ಕಿನ್ ಕೇರ್, ಹೇರ್ ಸ್ಟೈಲಿಂಗ್, ಗ್ರಾಹಕ ನಿರ್ವಹಣೆ, ಮಾರ್ಕೆಟಿಂಗ್ ತಂತ್ರಗಳು ಸೇರಿದಂತೆ ಹಲವು ಪ್ರಾಯೋಗಿಕ ಮತ್ತು ತಾತ್ವಿಕ ವಿಷಯಗಳ ಬಗ್ಗೆ ತರಬೇತಿ ಪಡೆಯುತ್ತಾರೆ. ಇದರ ಜೊತೆಗೆ ಬ್ಯೂಟಿ ಉತ್ಪನ್ನಗಳ (beauty products) ಕುರಿತಾದ ಮಾಹಿತಿ, ಸೇವೆಗಳ ಪ್ಯಾಕೇಜಿಂಗ್ ಬಗ್ಗೆ ಬೋಧನೆ ನಡೆಯುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿದಾರರು ಎರಡು ವಿಧಾನಗಳಲ್ಲಿ ಅರ್ಜಿ ಸಲ್ಲಿಸಬಹುದು:

ಆನ್ಲೈನ್ ಮೂಲಕ – ಈ Google Form (https://forms.gle/xgA47s1g7tUd8jBY9) ಲಿಂಕ್ ಬಳಸಿ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಬಹುದು.

ನೇರ ಕರೆ ಮೂಲಕ – ಈ ನಂಬರ್‌ಗಳಿಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು:

📞 08386-220530, 9449860007, 9538281989, 9916783825, 888044612

ಅಗತ್ಯ ದಾಖಲೆಗಳ ಪಟ್ಟಿ:

ಆಧಾರ್ ಕಾರ್ಡ್ (Aadhar)

ಪಾಸ್‌ಪೋರ್ಟ್ ಫೋಟೋ (Photo)

ಬ್ಯಾಂಕ್ ಪಾಸ್ ಬುಕ್ ಪ್ರತಿಗೆ (Bank Passbook)

ರೇಶನ್ ಕಾರ್ಡ್ (Ration Card)

ಮೊಬೈಲ್ ನಂಬರ್ (Mobile Number)

ತರಬೇತಿ ನಡೆಯುವ ಸ್ಥಳ:

ಇಂಡಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ – 581343

ಹೆಚ್ಚಿನ ಮಾಹಿತಿ: 9449860007, 9538281989, 9916783825, 888044612

ರೈತರ ಖಾತೆಗೆ ಸೈಬರ್ ವಂಚಕರ ಕನ್ನ: ಪಿಎಂ ಕಿಸಾನ್ ಆ್ಯಪ್, ಬ್ಯಾಂಕಿಂಗ್ ಸೇವೆ ಅಪ್ಡೇಟ್ ನಕಲಿ ಲಿಂಕ್ ಕಳುಹಿಸಿ ವಂಚನೆ

ವೃದ್ಧರು, ಬ್ಯುಸಿನೆಸ್ ಮ್ಯಾನ್ಗಳ ಕಿಸೆಗೆ ಕನ್ನ ಹಾಕುತ್ತಿದ್ದ ಸೈಬರ್ ಕಳ್ಳರು ಇದೀಗ ರೈತರನ್ನು ಗುರಿಯಾಗಿಸಿಕೊಂಡು ಹಣ ದೋಚಲು ಪ್ರಾರಂಭಿಸಿದ್ದಾರೆ. ವಾಟ್ಸ್ಆ್ಯಪ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡು ಸರ್ಕಾರಿ ಪ್ರಯೋಜನಗಳ ಕುರಿತು ನಕಲಿ ಭರವಸೆಗಳನ್ನು ನೀಡಿ ರೈತರ ಖಾತೆಗೆ ಕನ್ನ ಹಾಕಲು ಶುರು ಮಾಡಿದ್ದಾರೆ.ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ



ಪಿಎಂ ಕಿಸಾನ್ ಅಪ್ಲಿಕೇಶನ್ ಹಾಗೂ ಬ್ಯಾಂಕಿಂಗ್ ಸೇವೆಗಳ ಕುರಿತು ಅಪ್ಡೇಟ್ ಎಂದು ನಕಲಿ ಲಿಂಕ್ಗಳನ್ನು ಕಳುಹಿಸಿ, ಅದರ ಮೂಲಕ ರೈತರ ಖಾತೆಯಲ್ಲಿದ್ದ ಹಣವನ್ನು ಸೈಬರ್ ಕಳ್ಳರು ಎಗರಿಸುತ್ತಿದ್ದಾರೆ.

ನಕಲಿ ಲಿಂಕ್ ಮೂಲಕ ವಂಚನೆ:ನೇರವಾಗಿ ವಾಟ್ಸ್ಆ್ಯಪ್ನಲ್ಲಿ ಪಿಎಂ ಕಿಸಾನ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವುದರಿಂದ ಕೇಂದ್ರ ಸರ್ಕಾರ 6000 ರೂ. ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡುತ್ತದೆ ಎಂದು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಈ ಸಂದೇಶಗಳನ್ನು ಅಧಿಕೃತ ಯೋಜನೆಗಳು ಹಾಗೂ ಬ್ಯಾಂಕ್ಗಳ ಲೋಗೋಗಳನ್ನು, ರೈತರು ಸುಲಭವಾಗಿ ನಂಬುವಂತೆ ರಚಿಸಲಾಗಿರುತ್ತದೆ.

ಗಟ್ಟು ಮಂಡಲದಲ್ಲಿ ಇಂತಹ ಲಿಂಕ್ ಒಂದನ್ನು ಕ್ಲಿಕ್ ಮಾಡಿದ ರೈತ ಕೆಲವೇ ನಿಮಿಷಗಳಲ್ಲಿ ತಮ್ಮ ಖಾತೆಯಲ್ಲಿದ್ದ 64,500 ರೂ. ಕಳೆದುಕೊಂಡಿರುವ ಪ್ರಕರಣವೊಂದು ವರದಿಯಾಗಿದೆ. ತಾವು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ, ಆ ರೈತ ತಕ್ಷಣವೇ ಗುಟ್ಟು ಠಾಣೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಸಂಕಷ್ಟದಲ್ಲಿ ರೈತರು: 

ಸರ್ಕಾರ ಇತ್ತೀಚೆಗೆ ವಿವಿಧ ಯೋಜನೆಗಳ ಅಡಿಯಲ್ಲಿ ರೈತರಿಗೆ ಆರ್ಥಿಕ ನೆರವು ನೀಡುತ್ತಿರುವುದನ್ನು ಸೈಬರ್ ವಂಚಕರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಡಿಜಿಟಲ್ ಜಗತ್ತಿನ ಬಗ್ಗೆ ಹೆಚ್ಚು ತಿಳಿದಿರದ ರೈತರಿಗೆ ನಿಜವಾದ ಮತ್ತು ನಕಲಿ ಅಪ್ಲಿಕೇಶನ್‌ಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಸಾಧ್ಯವಾಗುತ್ತಿಲ್ಲ. ಎಸ್‌ಬಿಐ, ಪಿಎಂ ಕಿಸಾನ್ ಮತ್ತು ಇತರ ಬ್ಯಾಂಕ್‌ಗಳಿಂದ ಬಂದಿವೆ ಎಂದು ಹೇಳಿಕೊಳ್ಳುವ ನಕಲಿ ಅಪ್ಲಿಕೇಶನ್‌ಗಳು ಮೆಹಬೂಬ್‌ನಗರ ಜಿಲ್ಲೆಯಲ್ಲಿ, ವಿಶೇಷವಾಗಿ ರೈತ ಸಮುದಾಯಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಇತ್ತೀಚಿನ ವಂಚನೆ ಪ್ರಕರಣಗಳು:

ಧಾರೂರು ತಾಲೂಕಿನಲ್ಲಿ ಯುವಕನೊಬ್ಬನಿಗೆ ತನ್ನ ಎಸ್ಬಿಐ ಖಾತೆಯನ್ನು ಅಪ್ಡೇಟ್ ಮಾಡುವಂತೆ ವಾಟ್ಸ್ ಆ್ಯಪ್ನಲ್ಲಿ ಸಂದೇಶ ಬಂದಿದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿ, ಅದರಲ್ಲಿ ಎಲ್ಲಾ ವಿವರಗಳನ್ನು ನಮೂದಿಸಿದ ಯುವಕ 20 ಸಾವಿರ ರೂ. ಕಳೆದುಕೊಂಡಿದ್ದಾನೆ.

ಗಡ್ವಾಲ್ ಮಂಡಲದ ವ್ಯಕ್ತಿಯೊಬ್ಬರು ಮದುವೆ ಹಾಲ್ಗಳನ್ನು ಹುಡುಕಲು ಸಹಾಯ ಮಾಡುವ ಭರವಸೆ ನೀಡುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದರು. ಅದರಲ್ಲಿ ಅವರ ವೈಯಕ್ತಿಕ ವಿವರಗಳನ್ನು ನಮೂದಿಸಿದ್ದು, ತಕ್ಷಣವೇ ಖಾತೆಯಲ್ಲಿದ್ದ ಹಣವೆಲ್ಲ ಮಾಯವಾಗಿದೆ. ನಂತರ ಅವರಿಗೆ ಅದು ಸ್ಕ್ಯಾಮ್ ಆ್ಯಪ್ ಎಂಬುದು ಗೊತ್ತಾಗಿದೆ.

ವಾಟ್ಸಾಪ್ ಗುಂಪುಗಳ ದುರುಪಯೋಗ: 

ಸೈಬರ್ ವಂಚಕರು, ಗೊತ್ತಿಲ್ಲದೆ ಅಪರಿಚಿತ ಸದಸ್ಯರು ಗುಂಪಿಗೆ ಸೇರಲು ಅವಕಾಶ ನೀಡುವ ವಾಟ್ಸ್ ಆ್ಯಪ್ ಗ್ರೂಪ್ ಅಡ್ಮಿನ್ಗಳನ್ನು ಕೂಡ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ರೂಪ್ಗಳಿಗೆ ಜಾಯಿನ್ ಆಗುವ ಸೈಬರ್ ವಂಚಕರು, ಸರ್ಕಾರಿ ಯೋಜನೆಗಳ ಅಧಿಕಾರಿಗಳು ಅಥವಾ ಪ್ರತಿನಿಧಿಗಳಂತೆ ನಟಿಸಿ ನಕಲಿ ಅಪ್ಲಿಕೇಶನ್ಗಳ ಲಿಂಕ್ಗಳನ್ನು ಶೇರ್ ಮಾಡುತ್ತಾರೆ.

ಸೈಬರ್ ವಂಚನೆ ಕುರಿತು ಜಾಗೃತರಾಗುವಂತೆ ಪೊಲೀಸ್ ಮನವಿ:ಜೋಗುಲಾಂಬ ಜಿಲ್ಲಾ ಎಸ್ಪಿ ಶ್ರೀನಿವಾಸ್ ರಾವ್, "ನಮ್ಮ ಪೊಲೀಸ್ ತಂಡಗಳು ನಿರಂತರವಾಗಿ ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಜನರು ಜಾಗರೂಕರಾಗಿರಬೇಕು. ಮತ್ತು ಅಂತಹ ಘಟನೆಗಳನ್ನು ತಕ್ಷಣ ವರದಿ ಮಾಡಬೇಕು. ರೈತರು ಮತ್ತು ವಾಟ್ಸಾಪ್ ಗ್ರೂಪ್ ಅಡ್ಮಿನ್ಗಳು ಮೂಲಗಳ ಪರಿಶೀಲಿಸಬೇಕು. ಜೊತೆಗೆ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಜೊತೆಗೆ ಕ್ಲಿಕ್ ಮಾಡಿದರೂ ಅವುಗಳಿಗೆ ನಿಮ್ಮ ಬ್ಯಾಂಕ್ ವಿವರಗಳು ಹಾಕುವುದು ಅಥವಾ ಒಟಿಪಿ ಹಂಚಿಕೊಳ್ಳುವುದನ್ನು ಎಂದಿಗೂ ಮಾಡಬೇಡಿ" ಎಂದು ಸಲಹೆ ನೀಡಿದರು.

ವಂಚೆನಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?

ಪರಿಶೀಲಿಸಿದ ಲಿಂಕ್ಗಳು ಅಥವಾ ಫಾರ್ವರ್ಡ್ಗಳಿಂದ ಬಂದ ಅಪ್ಲಿಕೇಶನ್ಗಳನ್ನು ಯಾವತ್ತೂ ಇನ್ಸ್ಟಾಲ್ ಮಾಡಬೇಡಿ.

ಸರ್ಕಾರಿ ಯೋಜನೆಗಳು ಅಥವಾ ಬ್ಯಾಂಕಿಂಗ್ ಅಪ್ಡೇಟ್ಗಳನ್ನು ಅಧಿಕೃತ ವೆಬ್ಸೈಟ್ ಗಳ ಮೂಲಕವೇ ಮಾಡಿ.

ಅಪರಿಚಿತ ಸದಸ್ಯರನ್ನು ಗ್ರೂಪ್ಗಳಿಗೆ ಸೇರಿಸುವ ಮೊದಲು ಅಡ್ಮಿನ್ಗಳು ಜಾಗರೂಕರಾಗಿರಬೇಕು.

ವಂಚನೆ ನಡೆದಲ್ಲಿ, ತಕ್ಷಣ ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಅಪರಾಧ ಸೆಲ್ಗೆ ವರದಿ ಮಾಡಿ.


ನಮ್ಮ whatsapp  ಗ್ರೂಪ್ ಜಾಯಿನ್ ಆಗಿ https://chat.whatsapp.com/DDxUPlEHQlcGgoKAkQ8usM?mode=ac_c



ಬಾಕಿ ಗೃಹಲಕ್ಷ್ಮಿ ಹಣ ಬಿಡುಗಡೆ, 3 ತಿಂಗಳ ಹಣ ಒಟ್ಟಿಗೆ ಜಮಾ! ಬಂಪರ್ ಸುದ್ದಿ

 ಮೂರು ತಿಂಗಳ ಗೃಹಲಕ್ಷ್ಮಿ ಹಣ ಜುಲೈ 20ರೊಳಗೆ ಬಿಡುಗಡೆ.DBT ಪ್ರಕ್ರಿಯೆಯಿಂದ ಕೆಲವೊಂದು ದಿನ ವಿಳಂಬ ಸಾಧ್ಯತೆ.ಯೋಜನೆಯಿಂದ 1.1 ಕೋಟಿ ಮಹಿಳೆಯರಿಗೆ ಲಾಭ

ಮೂರು ತಿಂಗಳ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯದ ಮಹಿಳೆಯರು ಕಾಯುತ್ತಿರುವ ಸಮಯ ಮುಗಿಯುತ್ತಿರುವ ಲಕ್ಷಣಗಳಿವೆ.ರಾಜ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಜುಲೈ 20ರೊಳಗೆ ಖಾತೆಗೆ (Bank Account) ಜಮೆಯಾಗಲು ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದ್ದಾರೆ, ಈ ಮೂಲಕ ಮಹಿಳೆಯರ ಮುಖದಲ್ಲಿ ಕೊಂಚ ನೆಮ್ಮದಿ ಮೂಡಿದೆ.

ಬಾಕಿ ಗೃಹಲಕ್ಷ್ಮಿ ಹಣ ಬಿಡುಗಡೆ, 3 ತಿಂಗಳ ಹಣ ಒಟ್ಟಿಗೆ ಜಮಾ! ಬಂಪರ್ ಸುದ್ದಿ

ಇದೀಗಲೂ ಕೆಲವೊಂದು ತಾಂತ್ರಿಕ ತೊಂದರೆಗಳು ಹಾಗೂ DBT (Direct Benefit Transfer) ಪ್ರಕ್ರಿಯೆಯ ವ್ಯತ್ಯಯಗಳಿಂದಾಗಿ ಹಣದ ಜಮಾ ಕೆಲವೊಮ್ಮೆ ವಿಳಂಬವಾಗಬಹುದು ಎಂಬುದನ್ನು ಅವರು ಎಚ್ಚರಿಸಿದ್ದಾರೆ. ಬಾಕಿ ಇದ್ದ ಮೂರು ತಿಂಗಳ ಹಣದ ಒಟ್ಟು ಮೊತ್ತ ₹6,000 (ತಿಂಗಳಿಗೆ ₹2,000) ಗೃಹಿಣಿಯರ ಖಾತೆಗೆ ಜಮೆಯಾಗಲಿದೆ.

ಆದರೆ ಈ ಯೋಜನೆ ಅಡಿ ಹಣ ಬಿಡುಗಡೆ ವಿಳಂಬವಾಗುವುದು ಇದೇ ಮೊದಲು ಅಲ್ಲ. ಫೆಬ್ರವರಿಯಲ್ಲಿ ಬಿಡುಗಡೆಯಾಗಬೇಕಾದ ಹಣ ಜೂನ್‌ನಲ್ಲಿ ಲಭ್ಯವಾಯಿತು. ಹೀಗಾಗಿ ಹಲವರು ನಿರೀಕ್ಷೆಯಲ್ಲಿಯೇ ಕಾದು ಕುಳಿತಿದ್ದರು. “ಈ ತಿಂಗಳು ಬರುತ್ತೋ ಏನೋ…” ಎಂಬ ನಿರೀಕ್ಷೆಯಲ್ಲಿ ಮಹಿಳೆಯರು ಕಾಯುವುದು ಸಾಮಾನ್ಯವಾಗಿತ್ತು.

ಈಗಾಗಲೇ ರಾಜ್ಯ ಸರ್ಕಾರ 25,000 ಕೋಟಿ ರೂಪಾಯಿಗಳನ್ನು ಗೃಹಲಕ್ಷ್ಮಿ ಯೋಜನೆಯಡಿ ವಿತರಿಸಿದ್ದು, ಸುಮಾರು 1.1 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ನಿರಂತರ ವಿಳಂಬದಿಂದಾಗಿ ಜನರಲ್ಲಿ ಅಸಮಾಧಾನವೂ ಇದೆ ಎಂಬುದನ್ನು ನಿರಾಕರಿಸಲಾಗದು.

ಈ ಸಂದರ್ಭದಲ್ಲಿ, “ಜುಲೈ 20ರೊಳಗೆ ಹಣ ಖಾತೆಗೆ ಸೇರುವಂತೆ ನೋಡಿಕೊಳ್ಳಲಾಗುತ್ತೆ. ದಿನಾಂಕ ನಿಗದಿಯಾಗಿದ್ದರೂ, ಬ್ಯಾಂಕ್ ಪ್ರಕ್ರಿಯೆಯಿಂದ 2-3 ದಿನ ಅಂತರವಿರುವುದು ಸಹಜ” ಎಂಬ ಸಂದೇಶ ನೀಡುವ ಮೂಲಕ ಮಹಿಳೆಯರ ಭರವಸೆ ಪುನರ್ ಸ್ಥಾಪಿಸಲು ಸಚಿವರು ಯತ್ನಿಸಿದ್ದಾರೆ.